Uncategorized

ಶ್ರೀ ಕಾವೇರಿ ಆಶ್ರಮ ಭಕ್ತ ಜನ ಸಂಘ ವನ್ನು ಪುನಶ್ಚೇತನಗೊಳಿಸಿ ಹೊಸ ಪದಾಧಿಕಾರಿಗಳನ್ನು ನೇಮಿಸಲು ಅಖಿಲ ಕೊಡವ ಸಮಾಜದ ಸಲಹೆ

ಶ್ರೀ ಕಾವೇರಿ ಆಶ್ರಮ ಭಕ್ತ ಜನ ಸಂಘ ವನ್ನು ಪುನಶ್ಚೇತನಗೊಳಿಸಿ ಹೊಸ ಪದಾಧಿಕಾರಿಗಳನ್ನು ನೇಮಿಸಲು ಅಖಿಲ ಕೊಡವ ಸಮಾಜದ ಸಲಹೆ

ವಿರಾಜಪೇಟೆಯ ಶ್ರೀ ಕಾವೇರಿ ಭಕ್ತ ಜನಸಂಘ ದ ಆಶ್ರಯದಲ್ಲಿ ನಡೆಯುತಿದ್ದ ಶ್ರೀ ಕಾವೇರಿ ಆಶ್ರಮ ವು ಪರಭಾರೆಯ ಸುಳಿಯಲ್ಲಿ ಸಿಲುಕಿದ್ದು ಜನಾoಗದ ಸ್ಥಳೀಯ ತತ್ವಾದರ್ಶಗಳಿಂದ ಚಿಗುರೊಡೆದಿದ್ದ ಅನನ್ಯ 'ಸರಳ ಭಕ್ತಿಪಂಥ' ದಿಂದ ವಿಮುಖವಾಗಿರುವ ಇತ್ತೀಚಿನ ಬೆಳವಣಿಗೆಗಳ ಹಿನ್ನಲೆಯಲ್ಲಿ ಆಶ್ರಮವು ಅತ್ಯಂತ ಸಂಕಷ್ಟದ/ಅನಿಶ್ಚಿತತೆಯ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ನಿಟ್ಟಿನಲ್ಲಿ, ಶ್ರೀ ಕಾವೇರಿ ಭಕ್ತ ಜನಸಂಘದ ಆಶ್ರಯದಲ್ಲಿ ಆಶ್ರಮ ವು ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಜನಾಂಗ ಎದುರಿಸುತ್ತಿರುವ ಸಾಂಸಾರಿಕ ಕಲಹಗಳು, ವಿವಾಹ ವಿಚ್ಚೇದನೆಗಳು , ಅಸ್ತಿಪಾಸ್ತಿ ಗಾಗಿ ಮನಸ್ತಾಪಗಳಂತಹ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುವ ಸದೃಡ ಪೀಠವಾಗಿ, ಸ್ಥಳೀಯ ವೃದ್ಧರಿಗೆ, ಅಸಹಾಯಕರಿಗೆ, ನೊಂದವರಿಗೆ ಮತ್ತು ಸಂಕಷ್ಟದಲ್ಲಿರುವವರಿಗೆ ಆಶ್ರಯದ ತಾಣವಾಗಿ, ಆಧ್ಯಾತ್ಮಿಕ ಪ್ರಖರತೆಯಿಂದ ದಾರಿದೀಪವಾಗಿ ಬೆಳೆಸಬೇಕಾದ ಅವಶ್ಯಕತೆ ಇದೆ. ಈ ದಿಸೆಯಲ್ಲಿ ಮುನ್ನಡೆಯಲು ಶ್ರೀ ಕಾವೇರಿ ಆಶ್ರಮದ ಭಕ್ತ ಜನ ಸಂಘ ವನ್ನು ಪುನಶ್ಚೇತನಗೊಳಿಸಲು ಭಕ್ತ ಜನ ಸಂಘ ದ ಸದಸ್ಯರಾಗಿರುವ ಖ್ಯಾತ ಹಿರಿಯ ಸಾಹಿತಿ ಶ್ರೀ ಬಾಚರಣಿಯಂಡ ಪಿ ಅಪ್ಪಣ್ಣ ಅವರ ಅದ್ಯಕ್ಷತೆಯಲ್ಲಿ ಹೊಸ ಪದಾಧಿಕಾರಿಗಳನ್ನು ನೇಮಿಸಿಕೊಂಡು ಮುಂದುವರಿಯಲು ಅಖಿಲ ಕೊಡವ ಸಮಾಜ ಅದ್ಯಕ್ಷ ರಾದ ಶ್ರೀ ಪರದಂಡ ಸುಬ್ರಮಣಿ ಕಾವೇರಿಯಪ್ಪ ಸಲಹೆ ಮಾಡಿರುವರು.

ಸಂಭಾವಿತ ಪದಾಧಿಕಾರಿಗಳು:
ಅದ್ಯಕ್ಷರಾಗಿ ಶ್ರೀ ಬಾಚರಣಿಯಂಡ ಪಿ ಅಪ್ಪಣ್ಣ (ಭಕ್ತ ಜನ ಸಂಘ ದ ಸದಸ್ಯರು) ಮತ್ತು ಗೌ. ಅದ್ಯಕ್ಷರಾಗಿ (ಅಖಿಲ ಕೊಡವ ಸಮಾಜ ಅದ್ಯಕ್ಷರು). ಉಪಾದ್ಯಕ್ಷರುಗಳಾಗಿ ವಿರಾಜಪೇಟೆ ಕೊಡವ ಸಮಾಜ, ಮೈಸೂರು ಕೊಡವ ಸಮಾಜ, ಕುಶಾಲನಗರ ಕೊಡವ ಸಮಾಜ ಗಳ ಅಧ್ಯಕ್ಷರುಗಳು ಮತ್ತು ಶ್ರೀ ಕೊಲ್ಲಿರ ಉಮೇಶ್, ಶ್ರೀ ರಾಜೀವ್ ಬೋಪಯ್ಯ ಕಾರ್ಯದರ್ಶಿಗಳಾಗಿ ಶ್ರೀ ನಾಯಕಂಡ ಯು ಅರುಣ್ ಅಪ್ಪಯ್ಯ (ಹಾಲಿ ಕಾರ್ಯದರ್ಶಿ), ತಾತ್ಕಾಲಿಕ ಗೌ. ಕಾರ್ಯದರ್ಶಿ ಯಾಗಿ ಅಖಿಲ ಕೊಡವ ಸಮಾಜ ದ ಕಾರ್ಯದರ್ಶಿ ಹಾಗು ಇತರ ಒಬ್ಬರು. ಕೊಡವ ಸಮಾಜಗಳ ಪರ ಸದಸ್ಯರಾಗಿ ಪೊನ್ನಂಪೇಟೆ ಕೊಡವ ಸಮಾಜ, ಅಮ್ಮತ್ತಿ ಕೊಡವ ಸಮಾಜ, ನಾಪೋಕ್ಲು ಕೊಡವ ಸಮಾಜ, ಮೂರ್ನಾಡ್ ಕೊಡವ ಸಮಾಜ ಗಳ ಅದ್ಯಕ್ಷರು ಗಳು. ದಾನಿಗಳ ಪರ ಸದಸ್ಯರಾಗಿ ಶ್ರೀ ನೆಲ್ಲಮಕ್ಕಡ ಲೋಕೇಶ್ ಬೋಪಣ್ಣ, ಶ್ರೀ ಕುಟ್ಟಂಡ ಅಜಿತ್, ಪುಗ್ಗೆರ ಮಾಳೇಟಿರ ಪಳಂಗಂಡ ನಂಬಡುಮಾಡ ತಾತಂಡ ಕೊಂಗಂಡ ಪಟ್ಟಡ ಪಟ್ರಪಂಡ ಕುಟುಂಬ ಗಳಿಂದ ತಲಾ ಒಬ್ಬರು. ಹಾಲಿ ಎಲ್ಲಾ ಟ್ರಸ್ಟೀ ಗಳನ್ನು ಸದಸ್ಯರಾಗಿ ಉಳಿಸಿಕೊಳ್ಳುವಂತೆ ಮತ್ತು ಶ್ರೀ ಉಳ್ಳಿಯಡ ಎಂ ಪೂವಯ್ಯ (ಪತ್ರಿಕಾ ಸಂಪಾದಕರು) ನವರಿಗೆ ವಿಶೇಷ ಸ್ಥಾನ ನೀಡುವಂತೆ ಸಲಹೆ ಮಾಡಲಾಗಿದೆ.

ಪ್ರಕಟಣೆ: ಗೌ. ಕಾರ್ಯದರ್ಶಿ ಯವರಿಂದ